Friday, August 23 , 2019
ಕನ್ನಡದ ಬೃಹಸ್ಪತಿ

ಸಿನಿ ವಿಮರ್ಶೆ: ಕನ್ನಡಿಗರಲ್ಲಿ ನಿರೀಕ್ಷೆಯನ್ನು ಮೂಡಿಸಿದ್ದ ‘ಬೃಹಸ್ಪತಿ’ ಸಿನಿಮಾ ತೆರೆಗೆಬಂದಿದೆ. ಇದು ಛಲಗಾರನ ಸಾಧನೆಯನ್ನು ಮನಮುಟ್ಟುವಂತೆ ಚಿತ್ರೀಕರಿಸಿದೆ.

‘ಬೃಹಸ್ಪತಿ’ ಸಿನಿಮಾ ವಿಐಪಿ ಚಿತ್ರದ ರಿಮೇಕ್‌. ಹಾಗಂತ ಮೂಲ ಸಿನಿಮಾವನ್ನು ಕಾಪಿ ಮಾಡಿಲ್ಲ ನಿರ್ದೇಶಕ ನಂದಕಿಶೋರ್‌. ಕನ್ನಡಕ್ಕೆ ಒಪ್ಪುವಂತೆ  ಬದಲಾಯಿಸಿಕೊಂಡು ಮೇಕಿಂಗ್‌ ಮಾಡಿದ್ದಾರೆ.

ಬೃಹಸ್ಪತಿ ತಮಿಳಿನ ನಾಯಕ ಸುಧೀರ್‌ (ಮನೋರಂಜನ್‌ ರವಿಚಂದ್ರನ್‌) ಸಿವಿಲ್‌ ಎಂಜಿನಿಯರ್‌ ಓದಿದವನು. ಕೆಲಸವಿಲ್ಲ. ಸಂಬಳಕ್ಕೆ ಬೇರೆ ಉದ್ಯೋಗ ಮಾಡಲು ಆತ ಸಿದ್ಧನಿಲ್ಲ. ತನ್ನ ಓದಿಗೆ ತಕ್ಕಂತೆ ಕೆಲಸ ಸಿಗುವವರೆಗೂ ಮನೆಯಲ್ಲಿರುತ್ತಾನೆ. ಹೀಗೆ ಮನೆಯಲ್ಲಿರುವಾಗ ತಂದೆಯಿಂದ ‘ಕೆಲಸಕ್ಕೆ ಬಾರದವನು’ ಎಂದು ಬೈಸಿಕೊಳ್ಳುತ್ತಿರುತ್ತಾನೆ. ಈ ಸಮಯದಲ್ಲಿ ಈತನ ಬೆಂಬಲಕ್ಕೆ ನಿಲ್ಲುವವಳು ತಾಯಿ. ಯಾರು ಏನೇ ಅಂದರೂ ನಿರಾಳವಾಗಿರುತ್ತಾನೆ. ನಿರಂತರ ಕೆಲಸ ಹುಡುಕುತ್ತಲೇ ಇರುತ್ತಾನೆ. ಇಂತಹ ಸಮಯದಲ್ಲಿ ಆತನಿಗೆ ನಾಯಕಿ ಪರಿಚಯವಾಗುತ್ತಾಳೆ. ಅವಳೊಂದಿಗೆ ಪ್ರೇಮಾಂಕುರ ಆಗುತ್ತದೆ. ಪ್ರೀತಿಯ ಬಲೆಗೆ ಬಿದ್ದ ನಂತರ ಅವನು ಜೀವನ ಎತ್ತ ಸಾಗುತ್ತದೆ ಮತ್ತು ತನಗೆ ತಕ್ಕದಾದ ಕೆಲಸಕ್ಕೆ ಸೇರಿಕೊಂಡು ಸುಧೀರ್‌ ಅಂದುಕೊಂಡಿದ್ದನ್ನು ಸಾಧಿಸುತ್ತಾನಾ ಎಂಬುದೇ ಚಿತ್ರಕತೆ.

ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲು ಹಲವು ಕಾರಣಗಳನ್ನು ಕೊಡಬಹುದು. ರಿಮೇಕ್‌ ಸಿನಿಮಾವಾದರೂ, ಚಿತ್ರಕತೆಯನ್ನು ಸಂಪೂರ್ಣವಾಗಿ ಕನ್ನಡಿಕರಿಸಿದ್ದಾರೆ. ನಾಯಕನ ಪಾತ್ರಕ್ಕೆ ಮನೋರಂಜನ್‌ ರವಿಚಂದ್ರನ್‌ ಮತ್ತು ನಾಯಕಿಯ ಪಾತ್ರಕ್ಕೆ ಮಿಶ್ತಿ ಚಕ್ರವರ್ತಿಯ ಆಯ್ಕೆಯೂ ಚೆನ್ನಾಗಿದೆ. ಸಾಹೇಬ ಮೂಲಕ ಭರವಸೆ ಮೂಡಿಸಿದ್ದ ಮನೋರಂಜನ್‌, ಬೃಹಸ್ಪತಿಯಲ್ಲಿ ತಮ್ಮೊಳಗಿರುವ ನಟನಿಗೆ ಮತ್ತಷ್ಟು ಕೆಲಸ ಕೊಟ್ಟಿದ್ದಾರೆ. ಡೈಲಾಗ್‌ ಡಿಲೆವರಿಯಲ್ಲಿ ಕೊಂಚ ಸ್ಪಷ್ಟತೆ ಬೇಕು ಅನಿಸುತ್ತದೆ. ನಾನಾ ಆ್ಯಂಗಲ್‌ನಲ್ಲಿ ಮನೋರಂಜನ್‌ ತಮ್ಮ ತಂದೆ ರವಿಚಂದ್ರನ್‌ ಅವರನ್ನು ಹೋಲುತ್ತಾರೆ. ಪ್ರತಿಭಾವಂತ ನಿರ್ದೇಶಕರು ಮತ್ತು ಉತ್ತಮ ಕಥೆ ಸಿಕ್ಕರೆ ಮನೋರಂಜನ್‌ ಉತ್ತಮ ನಟನಾಗುವುದರಲ್ಲಿ ಅನುಮಾನವಿಲ್ಲ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]