Saturday, September 19 , 2020
BREAKING NEWS
 
ಭಾರತದ ರಹಸ್ಯಗಳನ್ನು ಚೀನಾಕ್ಕೆ ಸೋರಿಕೆ ಮಾಡುತ್ತಿದ್ದ ರಾಜೀವ್ ಶರ್ಮಾ ,          ಮದುವೆ ಮನೆಯಲ್ಲಿ ‘ಮಹಾನಾಯಕ’ ಫ್ಲೆಕ್ಸ್ | “ನಾವು ಬದಲಾದರೆ ಸಮಾಜ ಬದಲಾಗುತ್ತದೆ” ಎಂದ ಪ್ರೊ.ಹರಿರಾಮ್ ,          ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,         
ಒಕ್ಕಲಿಗ ಯುವಕನಿಗೆ ಎಚ್ ಐವಿ ಬಂದರೂ ಜಾತಿ ರೋಗ ಹೋಗಲಿಲ್ಲ | ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ

ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವವರು ಬಹುಶಃ ಎಸ್ ಸಿ, ಎಸ್ಟಿಗಳೇ ಇರಬೇಕು. ಹಿಂದೂ ಧರ್ಮದಲ್ಲಿ ಎಸ್ ಸಿ, ಎಸ್ಟಿಗಳಿಗೆ ಪ್ರತಿ ನಿತ್ಯ ಬರೇ ಅವಮಾನಗಳು ಮಾತ್ರ ದೊರೆಯುತ್ತಿದೆ. ಕೆಲವೆಡೆ ನೀರು ಕೊಡುವುದಿಲ್ಲ. ಕೆಲವು ಕಡೆಗಳಲ್ಲಿ ಮುಟ್ಟಿಸಿಕೊಳ್ಳುವುದಿಲ್ಲ. ಮೇಲ್ಜಾತಿಯವರು ಎನಿಸಿಕೊಂಡವರ ಕೀಳು ಮನೋಭಾವ ಪದೇ ಪದೇ ಎಸ್ ಸಿ, ಎಸ್ಟಿಗಳನ್ನು ಅವಮಾನ ಮಾಡುತ್ತಲೇ ಇವೆ.  ಕೆಲವು ದಿನಗಳಿಂದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು, ವರನೊಬ್ಬ ತನಗೆ ವಧು ಬೇಕು ಎಂದು ಕೇಳಿಕೊಳ್ಳಲು ಎಸ್ ಸಿ, ಎಸ್ಟಿಗಳಿಗೆ ಅವಮಾನ ಮಾಡಿದ್ದಾನೆ.

ಈ ಜಾಹೀರಾತು ಯಾವಾಗ ಪ್ರಕಟವಾಗಿದೆ ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ, ಅಲ್ಲಿ ಎಸ್ ಸಿ, ಎಸ್ಟಿಗಳನ್ನು ಅನಾವಶ್ಯಕವಾಗಿ ಎಳೆದುತಂದು ಅವಮಾನಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ಮನವಿ ಮಾಡಿಕೊಂಡಿರುವುದು ಇಷ್ಟೆ…

ವಧು ಬೇಕಾಗಿದೆ

38 ವರ್ಷದ ಹಿಂದೂ ಒಕ್ಕಲಿಗ ಹೆಚ್.ಐ.ವಿ.ಬಾದಿತ, ಸದೃಢ ಉತ್ತಮ ಆರ್ಥಿಕವಾಗಿ ಇರುವ ವರನಿಗೆ ಹೆಚ್ ಐವಿ ಬಾದಿತ ವಧು ಬೇಕಾಗಿದೆ, ಸ್ವ ಇಚ್ಛೆಯಿಂದ ಮದುವೆಯಾಗುವ ವಿಧವೆಯರು ಸಂಪರ್ಕಿಸಬಹುದು.

(ಎಸ್, ಎಸ್ಟಿ ಜಾತಿಯವರು ಬಿಟ್ಟು).

ಮೊ: 98445-19118

ಈ ಜಾಹೀರಾತಿನಲ್ಲಿ ಎಸ್ ಸಿ-ಎಸ್ಟಿಗಳ ವಿಚಾರ ಬೇಕಿತ್ತೇ? ಯಾರಾದರೂ ಎಸ್ ಸಿ-ಎಸ್ಟಿಗಳು ನಮ್ಮನ್ನು ಮದುವೆಯಾಗು ಎಂದು ಎಚ್ ಐವಿ ಪೀಡಿತ ಒಕ್ಕಲಿಗ ವರನಿಗೆ ಬೇಡಿಕೊಂಡಿದ್ದಾರಾ? ಅನಾವಶ್ಯಕವಾಗಿ ಎಸ್ ಸಿ, ಎಸ್ಟಿಗಳನ್ನು ಯಾಕೆ ಅವಮಾನಿಸಲಾಗುತ್ತಿದೆ. ಇವೇ ಮೊದಲಾದ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.

ಎಚ್ ಐವಿ ಹಿಡಿದರೂ ಒಕ್ಕಲಿಗ ಯುವಕನಿಗೆ ಜಾತಿ ರೋಗ ಹೋಗಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ಜಾಹೀರಾತು ಕೊಡುವವರು ಬಹಳಷ್ಟು ಜನರು ಇರಬಹುದು. ಆದರೆ ಇಂತಹ ಜಾಹೀರಾತುಗಳನ್ನು ಪ್ರಕಟಿಸುವ ಪತ್ರಿಕೆಯವರು ಎಂತವರು ಎಂದು ಜನ ಪ್ರಶ್ನಿಸುತ್ತಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]