Saturday, June 15 , 2019
ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ನೇರ ಕಾರಣವಾದ ಕಾಂಗ್ರೆಸ್ | ಕಾಂಗ್ರೆಸ್-ಬಿಜೆಪಿ ಸಂಬಂಧದ ಸುತ್ತ ಅನುಮಾನಗಳ ಹುತ್ತ!

ಉತ್ತರಪ್ರದೇಶ-ರಾಷ್ಟ್ರಧ್ವನಿ ವರದಿ(25.05.2019): ಉತ್ತರಪ್ರದೇಶದಲ್ಲಿ ಕಾಂಗ್ರೆಸ್, ಬಿಜೆಪಿಗೆ ಗೆಲುವಿಗೆ ಸಹಕಾರಿಯಾಗುವಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರಧ್ವನಿ ವಿಮರ್ಶೆ ಮಾಡಿತ್ತು. ಈ ವರದಿ ವಾಸ್ತವ ಎನ್ನುವುದು ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಬಯಲಾಗಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಿತ್ತು. ಉತ್ತರಪ್ರದೇಶದಲ್ಲಿ 10 ಕ್ಷೇತ್ರಗಳಲ್ಲಿ ಬಿಎಸ್ ಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿದ್ದ ಪ್ರದೇಶಗಳಲ್ಲಿ ಕಾಂಗ್ರೆಸ್, ಬಿಎಸ್ ಪಿ ಮತಗಳನ್ನು ಒಡೆದಿದೆ. ಈ ಮೂಲಕ ಬಿಜೆಪಿ ಗೆಲುವಿಗೆ ಪ್ರತ್ಯಕ್ಷವಾಗಿ ಕಾರಣವಾಗಿದೆ ಎನ್ನುವ ಅಂಶಗಳು ಬಯಲಾಗಿದೆ.

►►ಮೀರತ್ ನಲ್ಲಿ ಬಿಜೆಪಿ 5,82,976 ಮತಗಳನ್ನು ಪಡೆದು ಗೆಲುವು ಸಾಧಿಸಿತ್ತು. ಇಲ್ಲಿ ಬಿಎಸ್ ಪಿ-ಎಸ್ ಪಿ ಅಭ್ಯರ್ಥಿ ಪಡೆದ ಮತ 5,80,597. ಕಾಂಗ್ರೆಸ್ ಪಡೆದ ಮತ 34,301.

►►ಫಿರೋಜಾಬಾದ್ ನಲ್ಲಿ ಬಿಜೆಪಿ 4,94,050 ಮತಗಳನ್ನು ಪಡೆದುಕೊಂಡರೆ, ಬಿಎಸ್ ಪಿ-ಎಸ್ಪಿ ಅಭ್ಯರ್ಥಿ 4,65,686 ಮತಗಳನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಒಡೆದ ಮತಗಳ ಸಂಖ್ಯೆ 91,651.

►►ಬದಾಯುಂನಲ್ಲಿ ಬಿಜೆಪಿ ಪಡೆದ ಮತಗಳು 5,10,343. ಬಿಎಸ್ ಪಿ-ಎಸ್ ಪಿ ಅಭ್ಯರ್ಥಿ ಪಡೆದ ಮತ 4,91,959. ಕಾಂಗ್ರೆಸ್ ಒಡೆದ ಮತ 51,896.

►►ದೌಹರಾದಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮತ 5,12,582. ಬಿಎಸ್ ಪಿ-ಎಸ್ ಪಿ ಅಭ್ಯರ್ಥಿ ಪಡೆದ ಮತ 3,52,093. ಕಾಂಗ್ರೆಸ್ ಅಭ್ಯರ್ಥಿ ಒಡೆದ ಮತ 6,62,856.

►►ಸುಲ್ತಾನಪುರದಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮತ  4,58,281. ಬಿಎಸ್ ಪಿ-ಎಸ್ ಪಿ ಅಭ್ಯರ್ಥಿ ಪಡೆದ ಮತ 4,44,422. ಕಾಂಗ್ರೆಸ್ ಒಡೆದ ಮತ 41,681.

►►ಬಾಂದಾದಲ್ಲಿ ಬಿಜೆಪಿ ಪಡೆದ ಮತ 4.77,926. ಬಿಎಸ್ ಪಿ-ಎಸ್ ಪಿ ಅಭ್ಯರ್ಥಿ ಪಡೆದ ಮತ 4,18,988. ಕಾಂಗ್ರೆಸ್ ಒಡೆದ ಮತ 75,438.

►►ಬರಾಬಂಕಿಯಲ್ಲಿ ಬಿಜೆಪಿ ಪಡೆದ ಮತ 5,35,917.ಬಿಎಸ್ ಪಿ –ಎಸ್ಪಿ ಅಭ್ಯರ್ಥಿ ಪಡೆದ ಮತ 4,25,777. ಕಾಂಗ್ರೆಸ್ ಒಡೆದ ಮತ 1,59,611.

►►ಶ್ರಾವಸ್ತಿಯಲ್ಲಿ ಬಿಜೆಪಿ ಪಡೆದ ಮತ 4,44,505. ಬಿಎಸ್ ಪಿ -ಎಸ್ ಪಿ ಪಡೆದ ಮತ 4,36,228. ಕಾಂಗ್ರೆಸ್ ಒಡೆದ ಮತ 58,014.

►►ಬಸ್ತಿಯಲ್ಲಿ ಬಿಜೆಪಿ ಪಡೆದ ಮತ 4,69,214. ಬಿಎಸ್ ಪಿ-ಎಸ್ಪಿ ಅಭ್ಯರ್ಥಿ ಪಡೆದ ಮತ 4,37,641. ಕಾಂಗ್ರೆಸ್ ಒಡೆದ ಮತ 86,453.

►►ಸಂತ ಕಬೀರ್ ನಗರದಲ್ಲಿ ಬಿಜೆಪಿ ಪಡೆದ ಮತ 4,66,167. ಬಿಎಸ್ ಪಿ-ಎಸ್ಪಿ ಪಡೆದ ಮತ 4,30,819. ಕಾಂಗ್ರೆಸ್ ಒಡೆದ ಮತ 1,28,242.

ಬಿಜೆಪಿಯನ್ನು ಸೋಲಿಸುವುದೇ ನನ್ನ ಗುರಿ ಎಂದು ಹೇಳುತ್ತಾ ಹೊರಟ ಕಾಂಗ್ರೆಸ್ ಅಂತಿಮವಾಗಿ ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎನ್ನುವುದು ಇದೀಗ ಬಯಲಾದ ಸತ್ಯ. ಕೇವಲ ಉತ್ತರಪ್ರದೇಶ ಮಾತ್ರವಲ್ಲದೇ ದೇಶಾದ್ಯಂತ ಸ್ಥಳೀಯ ಪಕ್ಷಗಳ ಅಭ್ಯರ್ಥಿಗಳ ಸೋಲಿಗೆ ಕಾರಣವಾಗುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ –ಬಿಜೆಪಿ ಭಾಯಿ ಭಾಯಿ ಎನ್ನುವ ಅನುಮಾನಗಳಿಗೆ ಕಾಂಗ್ರೆಸ್ ಕಾರಣವಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...