Thursday, December 12 , 2019
ಅನ್ಯ ಜಾತಿಯವನೊಂದಿಗೆ ಓಡಿ ಹೋಗಿದ್ದ ವಿವಾಹಿತ ಮಹಿಳೆಗೆ ವಿಚಿತ್ರ ಶಿಕ್ಷೆ ನೀಡಿದ ಗ್ರಾಮಸ್ಥರು!

ಭೋಪಾಲ(14/04/2019): ಅನ್ಯ ಜಾತಿಯ ಪ್ರೇಮಿಯೊಂದಿಗೆ ಓಡಿ ಹೋಗಿದ್ದ 27ರ ಹರೆಯದ ವಿವಾಹಿತ ಮಹಿಳೆಗೆ ಗ್ರಾಮಸ್ಥರು ಪತಿಯನ್ನು ಹೊತ್ತೊಯ್ಯುವ ಅಮಾನವೀಯ ಶಿಕ್ಷೆ ನೀಡಿದ ಘಟನೆ ನಡೆದಿದೆ.

ಮಧ್ಯಪ್ರದೇಶದ ಜಭುವ ಜಿಲ್ಲೆಯ ದೇವಿಗಡದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಸೇರಿ ಮಹಿಳೆಗೆ ಥಳಿಸಿದ ಬಳಿಕ, ಪತಿಯನ್ನು ಹೆಗಲ ಮೇಲೆ ಹೊತ್ತೊಯ್ಯುವ ಶಿಕ್ಷೆ ನೀಡಿದ್ದಾರೆ. ಮಹಿಳೆ ಪತಿಯನ್ನು ಹೆಗಲ ಮೇಲೆ ಹೊತ್ತೊಯ್ಯುವ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಅನಾಗರಿಕ ಶಿಕ್ಷೆ ವಿಧಿಸಿರುವ ಗ್ರಾಮಸ್ಥರ ಮೇಲೆ ಟೀಕೆಗಳ ಸುರಿಮಳೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು,  ಇಬ್ಬರನ್ನು ಬಂಧಿಸಿದ್ದಾರೆ ಎಂದು ಐಎನ್ ಐ ವರದಿ ತಿಳಿಸಿದೆ.

10 ದಿನಗಳ ಹಿಂದೆ ಮಹಿಳೆ ಅನ್ಯ ಜಾತಿಗೆ ಸೇರಿದ ತನ್ನ ಪ್ರೇಮಿಯೊಂದಿಗೆ  ನಾಪತ್ತೆಯಾಗಿದ್ದಳು. ಆಕೆಯನ್ನು ಗುಜರಾತ್ ನಲ್ಲಿ ಪತ್ತೆ ಹಚ್ಚಿದ್ದ ಪತಿ ಮತ್ತು ಅತ್ತೆ-ಮಾವ  ತಮ್ಮ ಗ್ರಾಮಕ್ಕೆ ಎಳೆದು ತಂದಿದ್ದರು. ಆ ನಂತರ ಈ ಅಮಾನವೀಯ ಘಟನೆ ನಡೆದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]