Thursday, December 12 , 2019
ಅನಾಮಧೇಯ ದೂರಿನ ತನಿಖೆಗೆ ಬ್ರೇಕ್; ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ದೂರು ನೀಡಲಿದ್ದ ಸೇಫ್ ಹಾದಿ ಬಂದ್

ಬೆಂಗಳೂರು(21-11-2019): ಮೂಗರ್ಜಿ ದೂರುಗಳ ತನಿಖೆಗೆ ತಡೆ ನೀಡಿ ನೇರ ಆರೋಪದ ಪ್ರಕರಣವನ್ನು ಮಾತ್ರ ತನಿಖೆ ನಡೆಸಬೇಕೆಂಬ ಸರಕಾರದ ಆದೇಶದಿಂದ ಕೆಳಹಂತದ ಸಿಬ್ಬಂದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಬರುವ ಅನಾಮಧೇಯ ದೂರಿನ ಕುರಿತು ತನಿಖೆಗೆ ಸರಕಾರ ತಡೆ ನೀಡಿದೆ. ಇದರಿಂದಾಗಿ ಕೆಳಹಂತದ ಸಿಬ್ಬಂದಿಗಳಿಗೆ ತಮ್ಮ ಮೇಲಾಗುವ ದೌರ್ಜನ್ಯದ ಬಗ್ಗೆ ಗಮನ ಸೆಳೆಯಲಿದ್ದ ಒಂದೇ ಒಂದು ಸೇಫ್ ಹಾದಿ ಬಂದ್ ಆದಂತಾಗಿದೆ.

ನೇರವಾದಂತಹ ಆರೋಪವನ್ನು ಮೇಲಾಧಿಕಾರಿಗಳ ಮೇಲೆ ಮಾಡಿದ್ರೆ ಕೆಳಹಂತದ ಸಿಬ್ಬಂದಿಗಳ ಮೇಲೆ ಮತ್ತೆ ಪ್ರಕರಣ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಪೊಲೀಸರು ಕಂಗಾಲಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳ ವಿರುದ್ಧ ಬರುವ ಅನಾಮಧೇಯ ದೂರುಗಳಲ್ಲಿ 85% ಸತ್ಯವೇ ಆಗಿದ್ದು,  ಸರಕಾರದ ಆದೇಶದಿಂದ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ  ಸಿಬ್ಬಂದಿಗಳಿಗೆ ಪ್ರಶ್ನಿಸುವ ಅವಕಾಶವಿಲ್ಲದಾಗಿದೆ. ವೈಯಕ್ತಿಕ ದ್ವೇಷದಿಂದ ದೂರು ಸಲ್ಲಿಕೆ ಮಾಡಿದರೂ ಇದು ಕೇವಲ 15%ಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಒಂದು ವೇಳೆ ದ್ವೇಷದಿಂದ ದೂರು ಬಂದಿದ್ದಲ್ಲಿ ಪ್ರಕರಣದ ತನಿಖೆ ನಡೆಸಿದಾಗ ಸತ್ಯಾಸತ್ಯತೆ ಬಯಲಾಗುತ್ತದೆಯಲ್ವ, ಆದರೆ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರಕಾರ ಏಕಾಏಕಿ ದೂರಿನ ಮನ್ನಣೆಯನ್ನು ತೆಗೆದು ಹಾಕಿದ್ದು, ಟೀಕೆಗೆ ಗುರಿಯಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]