Saturday, September 19 , 2020
BREAKING NEWS
 
ಸೇತುವೆ ಕೊಚ್ಚಿ ಹೋಗಿ 30 ವರ್ಷವಾದರೂ ಸರ್ಕಾರ ನಿರ್ಮಿಸಲಿಲ್ಲ | ಸರ್ಕಾರಕ್ಕೆ ಮುಖಭಂಗವಾಗುವಂತೆ ತಾವೇ ಸೇತುವೆ ನಿರ್ಮಿಸಿದ ಗ್ರಾಮಸ್ಥರು ,          ಸೈಕಲ್ ನಲ್ಲಿ ತೆರಳಿದ್ದ ಬಾಲಕಿ ರಾತ್ರಿಯಾದರೂ ಬರಲಿಲ್ಲ! | ಬೆಳಗ್ಗೆ ಕಾದಿತ್ತು ಪೋಷಕರಿಗೆ ಶಾಕ್ | ಒಂದು ಮನಕರಗಿಸುವ ಘಟನೆ ,          ಕೊರೊನಾ ಹಾಟ್ ಸ್ಪಾಟ್ ಆದ ನಾಗಪುರದ ಆರೆಸ್ಸೆಸ್ ಕಚೇರಿ; 9 ಹಿರಿಯ ನಾಯಕರಿಗೆ ಕೋವಿಡ್ ಪಾಸಿಟಿವ್ ,          ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ನಡೆಯುತ್ತಿತ್ತಾ ಮತ್ತಿನ ದಂಧೆ | ಸ್ಟಾರ್ ನಟರ ಮೋಜು ಮಸ್ತಿಯ ಪಾರ್ಟಿಯಲ್ಲಿ ಡ್ರಗ್ಸ್ ನದ್ದೇ ಕಾರುಬಾರು! ,          ಈ ಬಾರಿಯ ದೆಹಲಿ ಪ್ರಯಾಣದಲ್ಲಿ ಆದ ಅನುಭವವೇನು? | ಸಿಎಂ ಯಡಿಯೂರಪ್ಪ ಏನು ಹೇಳಿದರು? ,          ಅಲ್ ಖೈದಾ ಭಯೋತ್ಪಾದಕರೆಂದು 9 ಮಂದಿಯ ಬಂಧಿಸಿದ ಎನ್ ಐಎ ,         
ಅಂಬೇಡ್ಕರ್ ಅವರನ್ನು ನಾವು ಹೇಗೆ ಅರ್ಥೈಸಿಕೊಂಡಿದ್ದೀವಿ..?

( ಬೆಂಗಳೂರಿನಲ್ಲಿ12-09-2019 ರಂದು ನಡೆದ ದಲಿತ ಐಕ್ಯತಾ ಸಮಾವೇಶದಲ್ಲಿ ಮಾಜಿ ಸಚಿವ ಎನ್.ಮಹೇಶ್ ಅವರ ಭಾಷಣದ ಸಾರಾಂಶ)

ಡಾ.ಅಂಬೇಡ್ಕರ್ ಅವರು 1918 ರಲ್ಲಿ ಈ ದೇಶದ ಪರಿಶಿಷ್ಟ ಜಾತಿ,‌ ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅಂದಿನ ಬ್ರಿಟೀಷ್ ಸರ್ಕಾರಕ್ಕೆ ಈ ಜನಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿ, ಈ ಜನಗಳ ನ್ಯಾಯಕ್ಕಾಗಿ ಅವರಿಗೆ ಸಿಗಬೇಕಾದ ಹಕ್ಕುಗಳಿಗಾಗಿ ಸಮಗ್ರ ವರದಿಯೊಂದನ್ನು ನೀಡಿದರು. ಅದು ಎಂತಹ ಕಾಲ..? ಬ್ರಿಟಿಷ್ ರು ನಾವು ಸಂಪೂರ್ಣ ಭಾರತದ ಸರ್ವಾಧಿಕಾರಿಗಳು, ನಮ್ಮ ಮಾತು ಇಲ್ಲಿ ಅಂತಿಮ, ಅದನ್ನು ಎಲ್ಲರೂ ಫಾಲೋ ಮಾಡ್ತಾರೆ ಎನ್ನುವ ಅಂಧಪ್ರಜ್ಞೆ ಅವರಲ್ಲಿ ಇತ್ತು. ಆ ಬ್ರಿಟೀಷರಿಗೆ ಈ ಮೇಲಿನ ಜನಗಳು ನಿಮ್ಮದೇ ಅಧಿಕಾರದಲ್ಲಿ ಮಾತನಾಡದೇ ಮೂಕರಾಗಿದ್ದಾರೆ, ಅಂದರೆ ನಿಮ್ಮ ಅಧಿಕಾರಕ್ಕಿಂತ ಇಲ್ಲಿ ನಿಮಗೆ ಗೊತ್ತಿಲ್ಲದೇ ನಿಮ್ಮ ಕಾನೂನುಗಳನ್ನು ಉಲ್ಲಂಘನೆ ಮಾಡಿ ನಡೆಯುತ್ತಿರುವ ಜನಗಳ ಬಗ್ಗೆ ಈ ಮೇಲಿನ ವ್ಯಕ್ತಿಗಳಿಗೆ ಭಯವಿದೆ. ಅದನ್ನು ಕಣ್ಣು ಬಿಟ್ಟು ನೋಡಿ ಎನ್ನುವ ವಿಷಯದೊಂದಿಗೆ, ಬ್ರಿಟಿಷ್ ಸಾಮ್ರಾಜ್ಯದಲ್ಲಿ ಬ್ರಿಟೀಷ್ ವಿರುದ್ದ ಇದ್ದಂತಹ ಜನಗಳನ್ನು ಏಕಾಕಾಲಕ್ಕೆ ಬ್ರಿಟೀಷರಿಗೆ ತೋರಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು, ಇಂತಹ ಮಾತನಾಡದ ಮೂಕ ಜನಗಳ ಪರ ಮಾತನಾಡುತ್ತಿರುವ ಆ ಜನಗಳ ಪಾಲಿಗೆ ನಾನು ಮೂಕನಾಯಕ ಎಂದು ಹೇಳಲು ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು..

ಈ ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಬ್ರಿಟೀಷರು ಇವುಗಳಿಗೆ ಸಾಕ್ಷಿಗಳನ್ನು ಹುಡುಕಲು, ಮತ್ತು ಆ ವರದಿಯನ್ನು ನಂಬುವುದಕ್ಕೆ ಬೇಕಾದ ಎಲ್ಲಾ ವಿಶೇಷ ಅಧ್ಯಯನಕ್ಕೆ 1928 ರಲ್ಲಿ ಸೈಮನ್ ಕಮಿಷನ್ ಅನ್ನು ಭಾರತಕ್ಕೆ ಕಳಿಸಿದರು. ಈ ಸೈಮನ್ ಕಮಿಷನ್ ಗೆ ಸಾಕ್ಷಿಗಳನ್ನು ನೀಡಲು 1927 ರಲ್ಲಿ ಚೌಡಾರ್ ಕೆರೆಯನ್ನು ಸಾವಿರಾರು ಜನಗಳ ಬೆಂಬಲದೊಂದಿಗೆ, ಇದು ಸಾರ್ವಜನಿಕ ಕೆರೆ ಇದರಲ್ಲಿನ ಪ್ರಕೃತಿದತ್ತವಾಗಿ ಸಿಗುವ ನೀರು ಯಾರಿಗೂ ಸೀಮಿತವಲ್ಲ, ಅದು ಎಲ್ಲರ ಸೊತ್ತು ಎಂದು ಮುಟ್ಟಲು ಹೋದಾಗ ಅಸಂಖ್ಯಾತ ಜಾತಿವಾದಿಗಳು ಆ ಹೋರಾಟವನ್ನು ವಿರೋಧಿಸಿದ್ದು, ಬ್ರಿಟೀಷ್ ರಿಗೆ ಸಾಕ್ಷಿಯಾಗಿ ಸಿಕ್ಕಿತು. ತದನಂತರ ದೇವಾಲಯೂ ಸರ್ವಾಜನಿಕ ಸ್ಥಳ, ಅದೂ ಸಹಿತ ಯಾರಿಗೂ ಸೀಮಿತವಲ್ಲ ಎಂದು ಸಾಕ್ಷಿ ನೀಡಲು, ಪುಣೆಯ ನಾಸಿಕ್ ನಲ್ಲಿರುವ ಕಾಳರಾಂ ಎನ್ನುವ ದೇವಾಲಯದ ಪ್ರವೇಶವನ್ನು ತಮ್ಮ ಸಾವಿರಾರು ಹಿಂಬಾಲಕರ ಜೊತೆಯಲ್ಲಿ ಮಾಡುತ್ತಾರೆ. ಈ ಹೋರಾಟದ ಉದ್ದೇಶ ದೇವರ ಗುಡಿಗೆ ನಮಗೆ ಪ್ರವೇಶ ಕೊಡಿ ಎಂಬುದಾಗಿರಲಿಲ್ಲ, ಬದಲಾಗಿ ಸಾರ್ವಜನಿಕ ಸ್ಥಳಗಳಾದ ದೇವಲಯಕ್ಕೂ ಇದೇ ದೇಶದ ನಮ್ಮಂತ ಜನಗಳ ಪ್ರವೇಶವಿಲ್ಲ ಎನ್ನುವ ಸಾಕ್ಷಿಯನ್ನು ಕೊಡುವುದಕ್ಕೆ. ಇದರಿಂದ ಆ ಸೈಮನ್ ಆಯೋಗಕ್ಕೆ ಸಾಕ್ಷಿಗಳು ಸಿಕ್ಕವು, ಇದರಿಂದ ಬಹಿಷ್ಕಾರಗೊಂಡ ಆ ಜನಗಳು ಬಹಿಷ್ಕರಿಸಲ್ಪಟ್ಟವರು ಎಂದು ಸಾಬೀತು ಮಾಡಿದರು ಮತ್ತು ತಮ್ಮ ಮೂಕನಾಯಕ ಎನ್ನುವ ಪತ್ರಿಕೆಗೆ ‘ಬಹಿಷ್ಕೃತ ಭಾರತ’ ಎಂದು ಹೆಸರಿಟ್ಟರು.

ಇದಾದ ನಂತರ, ಈ ಜನಗಳಿಗೆ ಹಕ್ಕುಗಳು ಬೇಕಾಗಿದ್ದವು. ಇದೇ ಜನಗಳು ಅಧಿಕಾರ ಪಡೆಯುವ ಮಾರ್ಗ ಬೇಕಾಗಿತ್ತು. ಅದು ಈ ಜನಗಳಿಂದ ಆಯ್ಕೆಯಾಗಬೇಕಾದ ಸರ್ಕಾರ ಮತ್ತು ಆ‌ ಸರ್ಕಾರದ ಅಡಿಯಲ್ಲಿ ಈ ಜನಗಳಿಗೆ ನ್ಯಾಯ ಸಿಗುವ ಮತ್ತು ಆಡಳಿತದಲ್ಲಿ ಅಧಿಕಾರ ಪಡೆಯುವ ಸಲುವಾಗಿ ಅವರಿಗೆ “ಮತ” ಎನ್ನುವ ಹಕ್ಕುಬೇಕಾಗಿತ್ತು, ಆ ಹಕ್ಕು “ಒಂದು ಓಟ್, ಒಂದು ಮೌಲ್ಯ,” ಕೋಟ್ಯಾಧಿಪತಿಗೂ ಒಂದೇ ಓಟು, ಕಸ ಗುಡಿಸುವ, ಜೀತ ಮಾಡುವ, ಕೊನೆಗೆ ಈ ದೇಶದ ವಾಸಿಗರು ಎಂದು ಗುರುತುಳ್ಳ ಭಿಕ್ಷುಕರಾಗಿದ್ದರೂ ಅವರಿಗೂ ಒಂದು ಓಟು ಎನ್ನುವ ಬೇಡಿಕೆಯನ್ನು ಬ್ರಿಟೀಷ್ ಸರ್ಕಾರದ ಮುಂದೆ ಸಲ್ಲಿಸಿ, ಆ ಜನಗಳಿಗೆ ಈ ಹಕ್ಕು ದೊರಕಿಸುವ ಮೂಲಕ ಬಹಿಷ್ಕೃತ ಭಾರತ ಎನ್ನುವ ಪತ್ರಿಕೆಯನ್ನು ತದನಂತರ ‘ಜನತಾ’ ಪತ್ರಿಕೆ ಎಂದು ನಾಮಕರಣ ಮಾಡಿದರು.

ಈ ಹೋರಾಟ ಇಲ್ಲಿಗೆ ಬರುವಷ್ಟರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಅವಕಾಶ ಸಮೀಪಿಸಿತ್ತು. ಸಂವಿಧಾನ ಬರೆಯವ ಅವಕಾಶ ಇವರಿಗೆ ದೊರೆಯಿತು, ಈ ಅವಕಾಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ದೇಶದ ಜನರೆಲ್ಲರೂ ಸಮನರಾಗಬೇಕು, ಸಮಾನತೆ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ‘ಸಮತ’ ಎನ್ನುವ ಪತ್ರಿಕೆಯ ಜೊತೆಗೆ ಸಂವಿಧಾನ ರಚನೆಯೂ ನಡೆಯಿತು, ನಂತರ ಸಂವಿಧಾನದ ಅಡಿಯಲ್ಲಿ ಎಲ್ಲಾ ಜನಗಳು ಸಮಾನತೆ ಸಾಧಿಸಿದ ಮೇಲೆ, ಭಾರತ ಪ್ರಬುದ್ದವಾಗಬೇಕು ಎನ್ನುವ ಅವರ ಕನಸ್ಸು

‘ಪ್ರಬುದ್ದ ಭಾರತ’ ಎಂದು ಬದಲಾಯಿತು, ಇದು ಅಂಬೇಡ್ಕರ್ ಅವರು ಹಂತ ಹಂತವಾಗಿ ಈ ಜನಗಳ ಏಳಿಗೆಗಾಗಿ ದುಡಿದ ಈ ದೇಶದ ಅಪ್ಪಟ ದೇಶಪ್ರೇಮಿ ಎಂದರೆ ಅಂಬೇಡ್ಕರ್ ಮಾತ್ರ, ಹಾಗಾಗಿ ಅವರಿಗೆ ಅವರೇ ಸಾಟಿ..,

ಈ ದೃಷ್ಟಿಯಲ್ಲಿ ಶೋಷಿತ ಜನಗಳ ವಿಮೋಚನೆಯೊಂದಿಗೆ ಬ್ರಿಟೀಷ್ ರಿಂದ ಮತ್ತು ಈ ದೇಶದ ಮನುವಾದಿಗಳಿಂದ ಏಕಕಾಲಕ್ಕೆ ಸ್ವಾತಂತ್ರ್ಯ ಬೇಕು ಎಂದು ಹೋರಾಟ ಮಾಡಿದ ವಿಭಿನ್ನ ವ್ಯಕ್ತಿ ಅಂಬೇಡ್ಕರ್ ಮಾತ್ರ, ಉಳಿದಂತೆ ಎಲ್ಲರೂ ಸ್ವಾತಂತ್ರ್ಯ ಪಡೆಯುವುದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಹೋರಾಟ ಮಾಡಿದರು ವಿನಃ ಇಂತಹ ಯಾವುದೇ ಜನಪರ ಕಾಳಜಿಯೊಂದಿಗೆ ಹೋರಾಟ ಮಾಡಿದರವರು ಯಾರು ಎನ್ನುವ ಪ್ರಶ್ನೆಯನ್ನು ನಾವು ತಿಳಿಯಬೇಕಿದೆ. ಅಂತಿಮವಾಗಿ ಅವರು ಸಂವಿಧಾನ ಪೀಠಿಕೆಯಲ್ಲಿ “we the people of ” ಎನ್ನುವ ಸಂದೇಶ ಮತ್ತು “ನಾವು ಮೊದಲು ಮತ್ತು ಕೊನೆಯವರೆಗೂ ಭಾರತೀಯರು” ಎನ್ನುವ ಅಂತಿಮ ಘೋಷಣೆಯೊಂದಿಗೆ ಭಾರತೀಯತೆಯನ್ನು ರಾಷ್ಟ್ರೀಯತೆಯನ್ನಾಗಿ ಕಟ್ಟುವುದು ನಮ್ಮ ಕರ್ತವ್ಯವಾಗಿದೆ. ಜೊತೆಗೆ ಈ ದೇಶದ ಸಂವಿಧಾನ ಪೀಠಿಕೆಯ ಸಾರಾಂಶವು ಇದೇ ಆಗಿದೆ, ಬನ್ನಿ ಭಾರತೀಯರಾಗೋಣ., ಎಲ್ಲರನ್ನೊಳಗೊಂಡ ಎಲ್ಲವನ್ನೊಳಗೊಂಡ ಭಾರತೀಯತೆಯನ್ನೇ ರಾಷ್ಟ್ರೀಯತೆಯನ್ನಾಗಿ ಕಟ್ಟೋಣ

-ಮಲ್ಲಿ ಎಸ್. ಬಳ್ಳಾರಿ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]